ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಚಕ್ರವರ್ತಿ ಇಮ್ಮಡಿ ದೇವರಾಯನ (1424-46) ಮುಖ್ಯ ಸಚಿವ ಹಾಗೂ ದಂಡನಾಯಕ ರಲ್ಲೊಬ್ಬ. ದಕ್ಷಿಣದ ರಾಜರನ್ನು ಮತ್ತು ಸಿಂಹಳ ದ್ವೀಪವನ್ನು ವಶಮಾಡಿ ಕೊಳ್ಳಲು ದೇವರಾಯ ಇವನ ನೇತೃತ್ವದಲ್ಲಿ ದೊಡ್ಡ ಸೈನ್ಯವೊಂದನ್ನು ಕಳುಹಿಸಿದ. ಈತ ಕ್ವಿಲಾನ್, ಪುಲಿಕಾಟ್ ಮತ್ತು ತೆನ್ನಾಸಿರಮ್ ರಾಜರನ್ನು ಸೋಲಿಸಿ ಅವರಿಂದ ಕಪ್ಪ ಕಾಣಿಕೆ ಪಡೆದ ವಿಷಯ ನ್ಯೂನಿಜನ ಬರೆವಣಿಗೆಯಿಂದ ತಿಳಿದುಬರುತ್ತದೆ. ಅನಂತರ ಸಿಂಹಳದ ಉತ್ತರ ಭಾಗದ ರಾಜನನ್ನು ಸೋಲಿಸಿ ಅವನನ್ನು ವಿಜಯನಗರ ಸಾಮ್ರಾಜ್ಯದ ಅಧೀನನನ್ನಾಗಿ ಮಾಡಿ ಅವನಿಂದಲೂ ಕಪ್ಪಕಾಣಿಕೆ ಪಡೆದ. ಸಿಂಹಳದ ಜನಪದಗೀತೆಗಳಲ್ಲಿ ಈ ಸಂಬಂಧಿಸಿದ ಮಾಹಿತಿಗಳಿವೆ. ಈತನ ಸಾಹಸ ಮೆಚ್ಚಿ ದಕ್ಷಿಣ ಸಮುದ್ರಸ್ವಾಮಿ ಎಂಬ ಬಿರುದನ್ನು ನೀಡಲಾಗಿತ್ತು. ಕುಣಿಗಲು ತಾಲ್ಲೂಕಿನ ನಾಗಿನೀ ನದಿ ಪಾಶ್ರ್ವದಲ್ಲಿ ತೋಂಟದ ಸಿದ್ಧಲಿಂಗಯತಿಯ ನೇತೃತ್ವದಲ್ಲಿ ವೀರಶೈವ ಮಠ ಸ್ಥಾಪಿಸಲು ಈತ ಪ್ರೋತ್ಸಾಹ ನೀಡಿದ.							
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ